Home
ಬಾದಾಮಿಯು ಸಮಸ್ತ ಭಾರತದಲ್ಲಿಯೇ ಶಿಲ್ಪಕಲೆ,ಚಿತ್ರಕಲೆ ಮತ್ತು ವಾಸ್ತುಶಿಲ್ಪಗಳಿಗಾಗಿ ಹೆಸರಾಂತ ತಾಣಗಳಲ್ಲಿ ಒಂದು. ಇದಕ್ಕೆ 'ವಿಶ್ವ ಪರಂಪರೆಯ ತಾಣ' (ವರ್ಲ್ಡ್ ಹೆರಿಟೇಜ್ ಸೈಟ್) ಎಂಬ ಮನ್ನಣೆಯನ್ನು ಕೊಡಲಾಗಿದೆ. ಬಾದಾಮಿಯು ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನಲ್ಲಿದೆ. ಇದು ಬಿಜಾಪುರ ನಗರದಿಂದ ಸುಮಾರು 120 ಕಿಲೋಮೀಟರುಗಳ ದೂರದಲ್ಲಿದೆ. ಬಾದಾಮಿ ಚಾಲುಕ್ಯ ರಾಜವಂಶದ ಶಿಲ್ಪಕಲಾವೈಭವದ ಇನ್ನೆರಡು ಸಾಕ್ಷಿಗಳಾದ ಐಹೊಳೆ ಮತ್ತು ಪಟ್ಟದಕಲ್ಲುಗಳು ಬಾದಾಮಿಯ ಸಮೀಪದಲ್ಲಿಯೇ ಇವೆ. ಈ ಊರು ಪುರಾಣಗಳ ಪ್ರಕಾರ ವಾತಾಪಿ ಮತ್ತು ಇಲ್ವಲ ಎಂಬ ರಾಕ್ಷಸರಿಗೆ ಸಂಬಂಧಿಸಿದ ಎರಡು ಬೆಟ್ಟಗಳ ನಡುವೆ ಹಾಗೂ 'ಅಗಸ್ತ್ಯ ಸರೋವರ'ವೆಂದು ಕರೆಯಲಾಗುವ ಸುಂದರವಾದ ಕೊಳದ ಪಶ್ಚಿಮ ದಿಕ್ಕಿನಲ್ಲಿ ಇದೆ.
ಬಾದಾಮಿಗೆ ಕ್ರಿಸ್ತಶಕದ ಪ್ರಾರಂಭದವರೆಗೆ ಹರಡಿಕೊಂಡಿರುವ ಸುದೀರ್ಘವಾದ ಇತಿಹಾಸವಿದೆ. ಪ್ರಸಿದ್ಧ ಗ್ರೀಕ್ ಭೂಗೋಳ ಶಾಸ್ತ್ರಜ್ಞನಾದ ಟಾಲೆಮಿ, ಕ್ರಿ.ಶ. 150 ರಲ್ಲಿಯೇ ಈ ಪಟ್ಟಣವನ್ನು 'ಬಾದಿಯಾ ಮೊಯಿ' ಎಂದು ಹೆಸರಿಸಿದ್ದಾನೆ. 'ಅಗಸ್ತ್ಯ ಸರೋವರದ' ಉತ್ತರ ದಿಕ್ಕಿನಲ್ಲಿ ಉತ್ಖನನ ನಡೆಸಿದಾಗ ದೊರೆತಿರುವ ಕೆಲವು ಮಡಕೆಯ ಚೂರುಗಳು ಹಾಗೂ ಪ್ರಾಚೀನ ಕಟ್ಟಡಗಳ ಅಡಿಪಾಯಗಳ ಅವಶೇಷಗಳು, ಕ್ರಿಸ್ತಶಕದ ಅರಂಭಕ್ಕಿಂತಲೂ ಬಹುಹಿಂದಿನ ಇತಿಹಾಸಪೂರ್ವ ನಾಗರಿಕತೆಗಳ ಅಸ್ತಿತ್ವಕ್ಕೆ ಪುರಾವೆ ನೀಡುತ್ತವೆ. ಬೆಟ್ಟಗಳ ಉತ್ತರ ಭಾಗದ ವಿಶಾಲವಾದ ಬಯಲಿನಲ್ಲಿರುವ ನಾಲ್ಕು ಗುಹೆಗಳ ಗೋಡೆಗಳ ಮೇಲಿನ ಸಿಕ್ಕಿರುವ ಬಣ್ಣದ ಚಿತ್ರಗಳು ಕ್ರಿಸ್ತಪೂರ್ವ ಯುಗಕ್ಕೆ ಸೇರಿದವೆಂದು ಊಹಿಸಲಾಗಿದೆ. ಇನ್ನೊಂದು ಗುಹೆಯೊಳಗೆ ಕಪ್ಪು-ಬಿಳುಪಿನ ಹಾಗೂ ಅಚ್ಚ ಕಪ್ಪು ಬಣ್ಣದ ಚಿತ್ರಗಳು ದೊರೆತಿದ್ದು ಅವು ಶಿಲಾಯುಗದಷ್ಟು ಹಳೆಯವೆಂದು ಹೇಳಬಹುದು. ಸಮೀಪದಲ್ಲಿರುವ ಮಲಪ್ರಭಾ ನದಿಯ ದಂಡೆಯಲ್ಲಿರುವ ಚೋಳಗುಡ್ಡ ಮತ್ತು ನಂದಿಕೇಶ್ವರ ಎಂಬ ಪ್ರದೇಶಗಳಲ್ಲಿ ಉತ್ಖನನ ನಡೆಸಿ ತೆಗೆದಿರುವ ಮಣ್ಣಿನ ಪಾತ್ರೆಗಳು ಮತ್ತು ಕಲ್ಲಿನ ುಪಕರಣಗಳು ಹಾಗೂ ಆಯುಧಗಳು ಹಳೆಯ ಶಿಲಾಯುಗ ಮತ್ತು ಹೊಸ ಯುಗಗಳಿಗೆ ಸೇರಿದವು. ಈ ಎಲ್ಲ ಸಾಕ್ಷಿಗಳು ಬಾದಾಮಿ ಚಾಳುಕ್ಯರ ಾಳ್ವಿಕೆಯ ಸ್ವರ್ಣಯುಗವಾಗಿದ್ದ ಆರರಿಂದ ಎಂಟನೆಯ ಶತಮಾನದವರೆಗೆ ಬಾದಾಮಿಯು ನಿರಂತರವಾದ ಚಟುವಟಿಕೆಗಳನ್ನು ಹೊಂದಿತ್ತೆನ್ನುವುದಕ್ಕೆ ಸಾಕ್ಷಿಯಾಗಿದೆ.
" ಸಾರ್ವಜನಿಕ ಕುಂದುಕೊರತೆ ವಿಭಾಗದ ಸಹಾಯವಾಣಿ " ಪೋ : 08357 - 220052
" ಜನನ ಮರಣ ಪ್ರಮಾಣ ಪತ್ರವನ್ನು ಆನ್ ಲೈನ್ ಮುಖಾಂತರ ಕಡ್ಡಾಯವಾಗಿ ಪಡೆಯಿರಿ "
ಗಣಕೀಕರಣ : ಬಾದಾಮಿ ಪುರಸಭೆ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕೃತಗೊಳಿಸಿದ್ದು. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ 1990 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ.
Computerization : Properties within Badami TMC limits have been identified & details have been collected & Computerization of records is Completed. Citizens can avail this facility to pay property tax shortly. Birth & Death records are available online from the year 1990. Citizens can make use of this facility to register & obtain Birth & Death Certificates.
Location : Near Bijapur & Bagalkot Karnataka
Languages : Kannada, English & Hindi
Population : 31305 (Cenus 2011)
Major Attraction : Cave Temples
Best Visiting Time : Months between October and February
Office No : 08357-220052
Fax No : 08357-220308
This Page is Maintained by Chief Officer, TMC Badami
Last date of updation : 05.05.2012

