Tourism

How to reach Badami City
ಇಂದು ಬಾದಾಮಿಯ ಕೀರ್ತಿಯು ಕೊಳದ ಪಶ್ಚಿಮ ಭಾಗದಲ್ಲಿರುವ ನಾಲ್ಕು ಗುಹೆಗಳನ್ನು ಅವಲಂಬಿಸಿದೆ. ಅವು ಬೇರೆ ಬೇರೆ ಎತ್ತರಗಳಲ್ಲಿ ನಿರ್ಮಿತವಾಗಿದ್ದು ಒಂದರಿಂದ ಇನ್ನೊಂದಕ್ಕೆ ಹೋಗಲು ಮೆಟ್ಟಿಲುಗಳಿವೆ. ಪ್ರತಿಯೊಂದು ಗುಹೆಯಲ್ಲಿಯೂ ಆಯತಾಕಾರದ ಮೊಗಸಾಲೆ(ವೆರಾಂಡಾ), ವಿಶಾಲವಾದ ಸಭಾಗೃಹ ಮತ್ತು ಗರ್ಭಗುಡಿಗಳಿವೆ. ಇವು ಅನುಕ್ರಮವಾಗಿ ಶಿವ, ವಿಷ್ಣು, ವಿಷ್ಣು ಮತ್ತು ಜೈನಧರ್ಮದ ದೇವತೆಗಳಿಗೆ ಮೀಸಲಾಗಿದೆ. ಶಿವನಿಗೆಂದು ಮೀಸಲಾಗಿರುವ ಮೊದಲನೆಯ ಗವಿಯಲ್ಲಿ ಒಂದು ಹೆಚ್ಚುವರಿ ಕೋಣೆಯಿದೆ. ಎರಡು ಮತ್ತು ಮೂರನೆಯ ಗುಹೆಗಳ ನಡುವೆ ಒಂದು ನೈಸರ್ಗಿಕವಾದ ಗವಿಯಿದ್ದು ಅದರಲ್ಲಿ ಪದ್ಮಪಾಣಿಯಾದ ಬುದ್ಧನ ಉಬ್ಬುಚಿತ್ರ(ಬಾಸ್ ರಿಲೀಫ್)ನ ಇದೆ. ಇದರ ಸುತ್ತಲೂ ಆಶೀರ್ವಾದ ಭಂಗಿಯಲ್ಲಿರುವ ಚಿತ್ರಗಳಿವೆ.
ನೆಲಮಟ್ಟದಿಂದ ಸುಮಾರು ನಲವತ್ತು ಮೆಟ್ಟಿಲುಗಳನ್ನು ಹತ್ತಿ ಮೊದಲನೆಯ ಗುಹೆಗೆ ಹೋಗಬೇಕು.ಅದರಲ್ಲಿ ಒಂದು ಶಿವಲಿಂಗವಿದೆ. ಇಲ್ಲಿರುವ, ತಾಂಡವನೃತ್ಯದಲ್ಲಿ ಮಗ್ನವಾಗಿರುವ ಹದಿನೆಂಟು ತೋಳುಗಳ ನಟರಾಜನ ಶಿಲ್ಪವು ಪ್ರಸಿದ್ಧವಾಗಿದೆ. ನಟರಾಜನನ್ನು ಎಂಬತ್ತೊಂದು ಭಂಗಿಗಳಲ್ಲಿ ತೋರಿಸಲಾಗಿದೆ. ಈ ಗುಹೆಯಲ್ಲಿಯೇ ಅರ್ಧನಾರೀಶ್ವರ ಮತ್ತು ಹರಿಹರೇಶ್ವರರ ಪ್ರತಿಮೆಗಳೂ ಇವೆ. ಇವು ಶಿವ ಮತ್ತು ವಿಷ್ಣುಗಳ ಏಕಭಾವವನ್ನೂ ಅಂತೆಯೇ ಪರುಷತತ್ವ ಹಾಗೂ ಸ್ತ್ರೀತತ್ವಗಳ ಸಮನ್ವಯವನ್ನೂ ಸಾಂಕೇತಿಕವಾಗಿ ನಿರೂಪಿಸುತ್ತವೆ. ಈ ಗುಹೆಯ ಗೋಡೆಗಳ ಮೇಲೆ ಮಹಿಷಾಸುರಮರ್ದಿನಿ, ಗಣಪತಿ ಮತ್ತು ನವಿಲಿನ ಮೇಲೆ ಆಸೀನನಾದ ಷಣ್ಮುಖನ ಉಬ್ಬುಚಿತ್ರಗಳನ್ನು ಕೆತ್ತಲಾಗಿದೆ. ಮೇಲ್ಭಾಗದ ತೊಲೆಗಳ ಮೇಲಿರುವ ಶಿವಪಾರ್ವತಿಯರ ವಿವಾಹದ ಶಿಲ್ಪ ಮತ್ತು ಚಾವಣಿಯ ಮೇಲಿರುವ ಗಜಲಕ್ಷ್ಮಿಯ ಶಿಲ್ಪಗಳು ಬಹಳ ಆಕರ್ಷಕವಾಗಿವೆ. ಗುಹೆಯಲ್ಲಿರುವ ಕಂಬಗಳು ಒಂದು ಮಿಥುನ ಶಿಲ್ಪ ಹಾಗೂ ನರಸಿಂಹ, ಗರುಡ, ಸನ್ಯಾಸಿ ಮತ್ತು ಪ್ರಹ್ಲಾದರ ಚಿಕ್ಕ ಶಿಲ್ಪಗಳಿಂದ ಅಲಂಕೃತವಾಗಿವೆ
ವಿಷ್ಣುವಿಗೆ ಮೀಸಲಾಗಿರುವ ಎರಡನೆಯ ಗುಹೆಯ ಗರ್ಭಗುಡಿಯೊಳಗೆ ಯಾವ ವಿಗ್ರಹವೂ ಇಲ್ಲ. ಪ್ರವೇಶದಲ್ಲಿಯೇ ಇರುವ ಇಬ್ಬರು ದ್ವಾರಪಾಲಕರ ಶಿಲ್ಪಗಳನ್ನು ನೋಡಿದ ನಂತರ ವಿಷ್ಣುವಿನ ಅವತಾರಗಳಾದ ಭೂವರಾಹ ಮತ್ತು ವಾಮನರ ಬೃಹತ ಗಾತ್ರದ ವಿಗ್ರಹಗಳು ಕಾಣಿಸುತ್ತವೆ. ಗುಹೆಯ ಜಂತಿಯ ಮೇಲೆ ವಿಷ್ಣುವಿನ ಬೇರೆ ಬೇರೆ ಅವತಾರಗಳಿಂದ ಆರಿಸಲಾದ ಘಟನೆಗಳನ್ನು ನಿರೂಪಿಸುವ ಚಿಕಣಿ ಶಿಲ್ಪಗಳು ರೂಪಿತವಾಗಿವೆ. ಹಾಗೆಯೇ ಕಂಬಗಳ ಮೇಲೆ ಬ್ರಹ್ಮ, ವಿಷ್ಣು, ಶಿವ ಮತ್ತು ಗಜಲಕ್ಷ್ಮಿಯರ ಶಿಲ್ಪಗಳನ್ನೂ ನೋಡಬಹುದು
ಇನ್ನಷ್ಟು ಮೇಲೆ ಹೋದ ನಂತರ ಸುಮಾರು ಕ್ರಿ.ಶ. 578 ರಲ್ಲಿ ನಿರ್ಮಿತವಾಗಿರುವ ಮೂರನೆಯ ಗುಹೆಯನ್ನು ತಲುಪುತ್ತೇವೆ. ಎಲ್ಲಕ್ಕಿಂತ ವಿಶಾಲವಾದ ಈ ಗುಹೆಯು ವಿಷ್ಣುವಿನ ವಿವಿಧ ಅವತಾರಗಳಿಗೆ ಮೀಸಲಾಗಿದೆ. ಪೌರಾಣಿಕವಾದ ಘಟನೆಗಳನ್ನು ನಿರೂಪಿಸುವ ಶಿಲ್ಪಗಳ ಸಂಗಡವೇ ದೈನಂದಿನ ಜೀವನದಿಂದ ತೆಗದುಕೊಂಡ ದೃಶ್ಯಗಳೂ ಇರುವುದು ಈ ಗುಹೆಯ ವಿಶೇಷ. ಹುಹೆಯ ಪ್ರವೇಶವು ಸುಮಾರು ಎಪ್ಪತ್ತು ಅಡಿಗಳಷ್ಟು ವಿಶಾಲವಾಗಿದೆ. ಅದರ ಮೇಲ್ಭಾಗದಲ್ಲಿ ಗಣಗಳ ಕೆತ್ತನೆಯನ್ನು ನೋಡಬಹುದು. ತನ್ನ ಅನುಪಮವಾದ ಕಲೆಗಾರಿಕೆ ಮತ್ತು ಶಿಲ್ಪಕಲಾಪ್ರತಿಭೆಗಳಿಂದ ಈ ಗುಹೆಯು ದಖನೀ ಕಲೆಯ ಶಿಖರ ಸಾಧನೆಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಆರನೆಯ ಶತಮಾಣದ ಜೀವನಶೈಲಿ ಮತ್ತು ಸಂಸ್ಕೃತಿಗಳನ್ನು ಅನಾವರಣ ಮಾಡುವ ಉಡುಪುಗಳು, ಒಡವೆಗಳು, ಕೇಶಶೈಲಿ ಮುಂತಾದ ಸಂಗತಿಗಳನ್ನು ಈ ಗುಹೆಯಲ್ಲಿ ಹೇರಳವಾಗಿ ಕಾಣಬಹುದು. ಇಲ್ಲಿರುವ ಅನಂತಸರ್ಪನ ಮೇಲೆ ಕುಳಿತ ವಿಷ್ಣು, ನರಸಿಂಹಾವತಾರ, ವರಾಹಾವತಾರ, ತ್ರಿವಿಕ್ರಮಾವತಾರ ಮತ್ತು ಹರಿಹರ ರೂಪಗಳ ಚೆಲುವಿಕೆಯನ್ನು ಸಾವಧಾನವಾಗಿ ವೀಕ್ಷಿಸಬೇಕು. ಈ ಗುಹೆಯಲ್ಲಿ, ನಿಸರ್ಗದತ್ತವಾದ ಬಣ್ಣಗಳನ್ನು ಉಪಯೋಗಿಸಿರುವ ಕೆಲವು ವರ್ಣಚಿತ್ರಗಳಿವೆ. ಇವುಗಳಲ್ಲಿ ಅನೇಕ ಚಿತ್ರಗಳು ಬಹಳ ಸುಂದರವಾಗಿದ್ದರೂ ಹಳತಾಗಿವೆ. ಈ ಗುಹೆಯ ಒಳಭಾಗದಲ್ಲಿ ಒಂದು ಸಂಸ್ಕೃತ ಶಾಸನ ಮತ್ತು ಒಳಭಾಗದಲ್ಲಿ ಒಂದು ಕನ್ನಡ ಶಾಸನಗಳನ್ನು ಶೋಧಿಸಲಾಗಿದೆ. ಇವೆರಡೂ ಚಾಳುಕ್ಯ ಚಕ್ರವರ್ತಿ ಕೀರ್ತಿವರ್ಮನ ಸೋದರನಾದ ಮಂಗಳೇಶನು ನೀಡಿದ ದಾನ, ದತ್ತಿಗಳಿಗೆ ಸಂಬಂಧಿಸಿದವು. ನಾಲ್ಕನೆಯ ಗುಹೆಯು ಜೈನಧರ್ಮಕ್ಕೆ ಸಂಬಂಧಪಟ್ಟ ಶಿಲ್ಪಗಳಿಗೆ ಮೀಸಲಾಗಿದೆ. ಇದರ ಮೊಗಸಾಲೆಯ ಮುಂಭಾಗದಲ್ಲಿ ಒಬ್ಬ ಕುಬ್ಜನ(ಕುಬೇರ?) ಉಬ್ಬುಶಿಲ್ಪವಿದೆ. ಅದರ ಛತ್ತಿನ ಮೇಲೆ ಒಂದು ಗಂಧರ್ವರ ಜೋಡಿಯೂ(ಯಕ್ಷ-ಯಕ್ಷಿ) ಅದರ ಬಲಭಾಗದಲ್ಲಿ ಶಿಷ್ಯಸಮೇತರಾದ ತೀರ್ಥಂಕರರ ಶಿಲ್ಪವೂ ಇವೆ. ಇವೆಲ್ಲವನ್ನೂ ಮೊಗಸಾಲೆಯ ಪ್ರವೇಶದಲ್ಲಿಯೇ ಕಾಣಬಹುದು. ಮುಖ್ಯ ಮಂಟಪದ ಎದುರು ಬದುರು ಗೋಡೆಗಳ ಮೇಲೆ ಬಾಹುಬಲಿ ಮತ್ತು ಸುಪಾರ್ಶ್ವನಾಥ ತೀರ್ಥಂಕರರ ಶಿಲ್ಪಗಳಿವೆ. ಈ ಗುಹೆಯ ಬೇರೆ ಬೇರೆ ಭಾಗಗಳಲ್ಲಿ ಮಹಾವೀರ ತೀರ್ಥಂಕರ, ಮಾತಂಗ ಯಕ್ಷ, ಸಿದ್ಧಾಯನಿ ಯಕ್ಷಿ ಮತ್ತು ಪದ್ಮಾವತಿ ಯಕ್ಷಿಯರ ಶಿಲ್ಪಗಳನ್ನು ನೋಡಬಹುದು. ಗರ್ಭಗುಡಿಯ ಹಿಂಭಾಗದ ಗೋಡೆಯನ್ನು ಮೇಲೆ ಮಹಾವೀರ ತೀರ್ಥಂಕರನ ಬೃಹತ್ ಮೂರ್ತಿಯು ಅಲಂಕರಿಸಿದೆ. ಈ ಎಲ್ಲ ಗುಹೆಗಳಿಗೂ ಸಮಾಣವಾದ ಕೆಲವು ಸಂಗತಿಗಳಿವೆ. "ಚಾಳುಕ್ಯ ಶಿಲ್ಪದ ಪ್ರಾಥಮಿಕ ಹಂತವು, ತನ್ನ ವಾಸ್ತವತಾವಾದ, ವಿಗ್ರಹಗಳ ತುಂಬುತನ ಮತ್ತು ಅಲಂಕರಣದಲ್ಲಿ ತೋರಿಸುವ ಸಂಯಮಗಳ ಫಲವಾಗಿ 'ಅಭಿಜಾತತೆ'ಯ ಕಡೆಗೆ ಒಲಿಯುತ್ತದೆ.(ಕ್ಲಾಸಿಕಲ್) ಈ ಸಂಗತಿಗಳಲ್ಲಿ ಅದು ತನ್ನ ಸಮಕಾಲೀನರಾದ ಪಲ್ಲವರು ಮತ್ತು ಅವರ ನಂತರ ಬಂದವರಿಗಿಂತ ಹೆಚ್ಚಾಗಿ ತನಗಿಂತ ಮೊದಲೇ ಇದ್ದ ಗುಪ್ತರನ್ನು ಹೋಲುತ್ತದೆ. ವಾಸ್ತುಶಿಲ್ಪದ ನೆಲೆಯಿಂದ ನೋಡಿದಾಗ ಉತ್ತರಾದಿ ಮತ್ತು ದಾಕ್ಷಿಣಾತ್ಯ ಲಕ್ಷಣಗಳೆರಡನ್ನೂ ಗುರುತಿಸಬಹುದು. ಎಷ್ಟೋ ಬಾರಿ ಇವೆರಡೂ ಒಂದೇ ದೇವಾಲಯದೊಳಗೆ ಕಂಡುಬರುತ್ತವೆ. ಹಂಟಿಂಗ್ ಟನ್, ಕೆಲವು ಸಮಾನ ಲಕ್ಷಣಗಳನ್ನು ಪಟ್ಟಿ ಮಾಡುತ್ತಾನೆ: ಗಾರೆಯನ್ನು ಬಳಸದ ಜೋಡಣೆಯ ಕ್ರಮ, ಕಡಿಮೆ ಎತ್ತರದ, ಉದ್ದವಾದ ಹಾಗೂ ಅಗಲ ಕಿರಿದಾದ(ನ್ಯಾರೋ) ದೇವಾಲಯ ರಚನೆಗಳು, ಅನೇಕ ಕಂಬಗಳಿರುವ ಸಭಾಂಗಣದ ಮೇಲೆ ಸಮತಲಾಕೃತಿಯ ಚಾವಣಿಗಳು, ಶ್ರೀಮಂತವಾಸ ಕೆತ್ತನೆಯ ಕೆಲಸವನ್ನು ಹೊಂದಿರುವ ಚಾವಣಿಗಳು ಮತ್ತು ಅನೇಕ ಚಿಕ್ಕ ಚಿಕ್ಕ ಶಿಲ್ಪಗಳ ಬದಲಾಗಿ ಕೆಲವೇ ಕೆಲವು ಬೃಹತ ಪ್ರತಿಮೆಗಳನ್ನು ಬಳಸುವ ಸಂಯೋಜನೆಗಳು. ಈ ಎಲ್ಲ ಗುಹೆಗಳಿಗೂ ಸಮಾಣವಾದ ಕೆಲವು ಸಂಗತಿಗಳಿವೆ. "ಚಾಳುಕ್ಯ ಶಿಲ್ಪದ ಪ್ರಾಥಮಿಕ ಹಂತವು, ತನ್ನ ವಾಸ್ತವತಾವಾದ, ವಿಗ್ರಹಗಳ ತುಂಬುತನ ಮತ್ತು ಅಲಂಕರಣದಲ್ಲಿ ತೋರಿಸುವ ಸಂಯಮಗಳ ಫಲವಾಗಿ 'ಅಭಿಜಾತತೆ'ಯ ಕಡೆಗೆ ಒಲಿಯುತ್ತದೆ.(ಕ್ಲಾಸಿಕಲ್) ಈ ಸಂಗತಿಗಳಲ್ಲಿ ಅದು ತನ್ನ ಸಮಕಾಲೀನರಾದ ಪಲ್ಲವರು ಮತ್ತು ಅವರ ನಂತರ ಬಂದವರಿಗಿಂತ ಹೆಚ್ಚಾಗಿ ತನಗಿಂತ ಮೊದಲೇ ಇದ್ದ ಗುಪ್ತರನ್ನು ಹೋಲುತ್ತದೆ. ವಾಸ್ತುಶಿಲ್ಪದ ನೆಲೆಯಿಂದ ನೋಡಿದಾಗ ಉತ್ತರಾದಿ ಮತ್ತು ದಾಕ್ಷಿಣಾತ್ಯ ಲಕ್ಷಣಗಳೆರಡನ್ನೂ ಗುರುತಿಸಬಹುದು. ಎಷ್ಟೋ ಬಾರಿ ಇವೆರಡೂ ಒಂದೇ ದೇವಾಲಯದೊಳಗೆ ಕಂಡುಬರುತ್ತವೆ. ಹಂಟಿಂಗ್ ಟನ್, ಕೆಲವು ಸಮಾನ ಲಕ್ಷಣಗಳನ್ನು ಪಟ್ಟಿ ಮಾಡುತ್ತಾನೆ: ಗಾರೆಯನ್ನು ಬಳಸದ ಜೋಡಣೆಯ ಕ್ರಮ, ಕಡಿಮೆ ಎತ್ತರದ, ಉದ್ದವಾದ ಹಾಗೂ ಅಗಲ ಕಿರಿದಾದ(ನ್ಯಾರೋ) ದೇವಾಲಯ ರಚನೆಗಳು, ಅನೇಕ ಕಂಬಗಳಿರುವ ಸಭಾಂಗಣದ ಮೇಲೆ ಸಮತಲಾಕೃತಿಯ ಚಾವಣಿಗಳು, ಶ್ರೀಮಂತವಾಸ ಕೆತ್ತನೆಯ ಕೆಲಸವನ್ನು ಹೊಂದಿರುವ ಚಾವಣಿಗಳು ಮತ್ತು ಅನೇಕ ಚಿಕ್ಕ ಚಿಕ್ಕ ಶಿಲ್ಪಗಳ ಬದಲಾಗಿ ಕೆಲವೇ ಕೆಲವು ಬೃಹತ ಪ್ರತಿಮೆಗಳನ್ನು ಬಳಸುವ ಸಂಯೋಜನೆಗಳು. ಈ ಎಲ್ಲ ಗುಹೆಗಳಿಗೂ ಸಮಾಣವಾದ ಕೆಲವು ಸಂಗತಿಗಳಿವೆ. "ಚಾಳುಕ್ಯ ಶಿಲ್ಪದ ಪ್ರಾಥಮಿಕ ಹಂತವು, ತನ್ನ ವಾಸ್ತವತಾವಾದ, ವಿಗ್ರಹಗಳ ತುಂಬುತನ ಮತ್ತು ಅಲಂಕರಣದಲ್ಲಿ ತೋರಿಸುವ ಸಂಯಮಗಳ ಫಲವಾಗಿ 'ಅಭಿಜಾತತೆ'ಯ ಕಡೆಗೆ ಒಲಿಯುತ್ತದೆ.(ಕ್ಲಾಸಿಕಲ್) ಈ ಸಂಗತಿಗಳಲ್ಲಿ ಅದು ತನ್ನ ಸಮಕಾಲೀನರಾದ ಪಲ್ಲವರು ಮತ್ತು ಅವರ ನಂತರ ಬಂದವರಿಗಿಂತ ಹೆಚ್ಚಾಗಿ ತನಗಿಂತ ಮೊದಲೇ ಇದ್ದ ಗುಪ್ತರನ್ನು ಹೋಲುತ್ತದೆ. ವಾಸ್ತುಶಿಲ್ಪದ ನೆಲೆಯಿಂದ ನೋಡಿದಾಗ ಉತ್ತರಾದಿ ಮತ್ತು ದಾಕ್ಷಿಣಾತ್ಯ ಲಕ್ಷಣಗಳೆರಡನ್ನೂ ಗುರುತಿಸಬಹುದು. ಎಷ್ಟೋ ಬಾರಿ ಇವೆರಡೂ ಒಂದೇ ದೇವಾಲಯದೊಳಗೆ ಕಂಡುಬರುತ್ತವೆ. ಹಂಟಿಂಗ್ ಟನ್, ಕೆಲವು ಸಮಾನ ಲಕ್ಷಣಗಳನ್ನು ಪಟ್ಟಿ ಮಾಡುತ್ತಾನೆ: ಗಾರೆಯನ್ನು ಬಳಸದ ಜೋಡಣೆಯ ಕ್ರಮ, ಕಡಿಮೆ ಎತ್ತರದ, ಉದ್ದವಾದ ಹಾಗೂ ಅಗಲ ಕಿರಿದಾದ(ನ್ಯಾರೋ) ದೇವಾಲಯ ರಚನೆಗಳು, ಅನೇಕ ಕಂಬಗಳಿರುವ ಸಭಾಂಗಣದ ಮೇಲೆ ಸಮತಲಾಕೃತಿಯ ಚಾವಣಿಗಳು, ಶ್ರೀಮಂತವಾಸ ಕೆತ್ತನೆಯ ಕೆಲಸವನ್ನು ಹೊಂದಿರುವ ಚಾವಣಿಗಳು ಮತ್ತು ಅನೇಕ ಚಿಕ್ಕ ಚಿಕ್ಕ ಶಿಲ್ಪಗಳ ಬದಲಾಗಿ ಕೆಲವೇ ಕೆಲವು ಬೃಹತ ಪ್ರತಿಮೆಗಳನ್ನು ಬಳಸುವ ಸಂಯೋಜನೆಗಳು. ಈ ಎಲ್ಲ ಗುಹೆಗಳಿಗೂ ಸಮಾಣವಾದ ಕೆಲವು ಸಂಗತಿಗಳಿವೆ. "ಚಾಳುಕ್ಯ ಶಿಲ್ಪದ ಪ್ರಾಥಮಿಕ ಹಂತವು, ತನ್ನ ವಾಸ್ತವತಾವಾದ, ವಿಗ್ರಹಗಳ ತುಂಬುತನ ಮತ್ತು ಅಲಂಕರಣದಲ್ಲಿ ತೋರಿಸುವ ಸಂಯಮಗಳ ಫಲವಾಗಿ 'ಅಭಿಜಾತತೆ'ಯ ಕಡೆಗೆ ಒಲಿಯುತ್ತದೆ.(ಕ್ಲಾಸಿಕಲ್) ಈ ಸಂಗತಿಗಳಲ್ಲಿ ಅದು ತನ್ನ ಸಮಕಾಲೀನರಾದ ಪಲ್ಲವರು ಮತ್ತು ಅವರ ನಂತರ ಬಂದವರಿಗಿಂತ ಹೆಚ್ಚಾಗಿ ತನಗಿಂತ ಮೊದಲೇ ಇದ್ದ ಗುಪ್ತರನ್ನು ಹೋಲುತ್ತದೆ. ವಾಸ್ತುಶಿಲ್ಪದ ನೆಲೆಯಿಂದ ನೋಡಿದಾಗ ಉತ್ತರಾದಿ ಮತ್ತು ದಾಕ್ಷಿಣಾತ್ಯ ಲಕ್ಷಣಗಳೆರಡನ್ನೂ ಗುರುತಿಸಬಹುದು. ಎಷ್ಟೋ ಬಾರಿ ಇವೆರಡೂ ಒಂದೇ ದೇವಾಲಯದೊಳಗೆ ಕಂಡುಬರುತ್ತವೆ. ಹಂಟಿಂಗ್ ಟನ್, ಕೆಲವು ಸಮಾನ ಲಕ್ಷಣಗಳನ್ನು ಪಟ್ಟಿ ಮಾಡುತ್ತಾನೆ: ಗಾರೆಯನ್ನು ಬಳಸದ ಜೋಡಣೆಯ ಕ್ರಮ, ಕಡಿಮೆ ಎತ್ತರದ, ಉದ್ದವಾದ ಹಾಗೂ ಅಗಲ ಕಿರಿದಾದ(ನ್ಯಾರೋ) ದೇವಾಲಯ ರಚನೆಗಳು, ಅನೇಕ ಕಂಬಗಳಿರುವ ಸಭಾಂಗಣದ ಮೇಲೆ ಸಮತಲಾಕೃತಿಯ ಚಾವಣಿಗಳು, ಶ್ರೀಮಂತವಾಸ ಕೆತ್ತನೆಯ ಕೆಲಸವನ್ನು ಹೊಂದಿರುವ ಚಾವಣಿಗಳು ಮತ್ತು ಅನೇಕ ಚಿಕ್ಕ ಚಿಕ್ಕ ಶಿಲ್ಪಗಳ ಬದಲಾಗಿ ಕೆಲವೇ ಕೆಲವು ಬೃಹತ ಪ್ರತಿಮೆಗಳನ್ನು ಬಳಸುವ ಸಂಯೋಜನೆಗಳು. ಈ ಗುಹೆಗಳಲ್ಲದೆ ಬಾದಾಮಿಯು ತನ್ನ ಇತಿಹಾಸದ ವಿಭಿನ್ನ ಹಂತಗಳಲ್ಲಿ ಕಟ್ಟಲಾದ ದೇವಾಲಯಗಳಿಗಾಗಿಯೂ ಪ್ರಸಿದ್ಧವಾಗಿದೆ. ಊರಿನ ಉತ್ತರ ಭಾಗದಲ್ಲಿರುವ ಗುಡ್ಡದ ಮೇಲೆ ಮೂರು ಶಿವ ದೇವಾಲಯಗಳಿವೆ. ಅವುಗಳನ್ನು ಮಾಲೆಗಿತ್ತಿ ಶಿವದೇವಾಲಯ, ಕೆಳಗಿನ ಶಿವಾಲಯ ಮತ್ತು ಮೇಲಿನ ಶಿವಾಲಯಗಳೆಂದು ಕರೆಯಲಾಗಿದೆ.ಮಾಲೆಗಿತ್ತಿ ಶಿವಾಲಯವನ್ನು ಏಳನೆಯ ಶತಮಾನದ ಕೊನೆಯ ಭಾಗದಲ್ಲಿಯೂ ಉಳಿದೆರಡು ದೇವಾಲಯಗಳನ್ನು ಅದಕ್ಕಿಂತ ಮೊದಲು ಎಂದರೆ ಸುಮಾರು ಆರನೆಯ ಶತಮಾನದ ಮೊದಲ ಭಾಗದಲ್ಲಿಯೂ ನಿರ್ಮಿಸಲಾಗಿದೆ. ಈ ದೇವಾಲಯಗಳು ಸಂಕುಚಿತವಾದ ದೇವಪಕ್ಷಪಾತದಿಂದ ಮುಕ್ತವಾಗಿವೆ. ಇಲ್ಲಿ ಶೈವ ಮತ್ತು ವೈಷ್ಣವ ಆಶಯಗಳೆರಡಕ್ಕೂ ಸಮಾನ ಮಹತ್ವ ಸಿಕ್ಕಿದೆ. ನಟರಾಜ ಮತ್ತು ಶಿವರ ಪ್ರತಿಮೆಗಳ ನೆರೆಯಲ್ಲಿಯೇ ಭಾಗವತ ಮತ್ತು ರಾಮಾಯಣಗಳಿಂದ ಆಯ್ದು ತೆಗೆದ ಸನ್ನಿವೇಶಗಳ ಶಿಲ್ಪಗಳನ್ನು ಕಾಣಬಹುದು. ಬಾದಾಮಿ ಊರಿನೊಳಗೆ ಇರುವ ಜಂಬುಲಿಂಗ ದೇವಾಲಯವು ಮೊದಲು ಬ್ರಹ್ಮ-ವಿಷ್ಣು-ಶಿವ ದೇವಾಲಯವಾಗಿತ್ತು. ಇದು ಕರ್ನಾಟಕದಲ್ಲಿ ದೊರೆತ ಮೊಟ್ಟಮೊದಲ ತ್ರಿಕೂಟಾಚಲ ಮಾದರಿಯ ಗುಡಿ. ಇದನ್ನು ಏಳನೆಯ ಶತಮಾನದಲ್ಲಿ ನಿರ್ಮಿಸಲಾಯಿತು.ಇದರಲ್ಲಿ ಮೂರು ಶಾಸನಗಳು ದೊರೆತಿವೆ. 'ಅಗಸ್ತ್ಯತೀರ್ಥ' ಸರೋವರದ ಸುತ್ತಲೂ ಅನೇಕ ಚಿಕ್ಕ ಚಿಕ್ಕ ಗುಡಿಗಳಿವೆ. ಇವುಗಳನ್ನು ಏಳನೆಯ ಶತಮಾನದಿಂದ ಹದಿನೇಳನೆಯ ಶತಮಾನದವರೆಗಿನ ಸುದೀರ್ಘ ಅವಧಿಯಲ್ಲಿ ವಿಭಿನ್ನ ರಾಜವಂಶಗಳ ಆಳ್ವಿಕೆಯಲ್ಲಿ ಕಟ್ಟಲಾಯಿತು. ಬಾದಾಮಿಯಲ್ಲಿ ಮತ್ತು ಅದರ ಆಸುಪಾಸಿನಲ್ಲಿ ಅನೇಕ ಶಾಸನಗಳು ದೊರೆತಿವೆ. ಇವುಗಳಲ್ಲಿ 'ಕಪ್ಪೆ ಅರಭಟ್ಟನ ಶಾಸನ'ವು ಮುಖ್ಯವಾದುದು. ಇದರಲ್ಲಿ ಕನ್ನಡದ ಪ್ರಸಿದ್ಧ ಛಂದೋಬಂಧವಾದ ತ್ರಿಪದಿಯು ಮೊಟ್ಟಮೊದಲ ಬಾರಿಗೆ ಬಳಕೆಯಾಗಿದೆ. (ಏಳನೆಯ ಶತಮಾನ) ಪಲ್ಲವ ನರಸಿಂಹವರ್ಮ-1 ಎಂಬ ರಾಜನು ಕ್ರಿ.ಶ.642 ರಲ್ಲಿ ಸ್ಥಾಪಿಸಿದ ಸಂಸ್ಕೃತ ಶಾಸನವು ಕೋಟೆಗೆ ಹೋಗುವ ಹಾದಿಯಲ್ಲಿ ಒಂದು ಬಂಡೆಯ ಮೇಲೆ ಲಿಖಿತವಾಗಿದೆ. ಬಾದಾಮಿಯಲ್ಲಿ ಭಾರತ ಸರ್ಕಾರದ ಪುರಾತತ್ವ ಇಲಾಖೆಯು ನಿರ್ವಹಿಸುತ್ತಿರುವ ವಸ್ತುಸಂಗ್ರಹಾಲಯವಿದೆ. ಇಲ್ಲಿ ನೈಸರ್ಗಿಕವಾದ ಗುಹೆಯ ಮಾದರಿಯೊಂದನ್ನು ಪ್ರದರ್ಶಿಸಲಾಗಿದೆ. ಅದರೊಳಗೆ ಇತಿಹಾಸಪೂರ್ವಯುಗದ ಕೆಲವು ವಸ್ತುಗಳನ್ನು ಅಂತೆಯೇ ಮೂರನೆಯ ಗುಹೆಯಿಂದ ಪ್ರತಿಮಾಡಿದ ವರ್ಣಚಿತ್ರದ ಪ್ರತಿಯೊಂದನ್ನು ಪ್ರದರ್ಶಿಸಲಾಗಿದೆ. ಪಟ್ಟದಕಲ್ಲಿನಲ್ಲಿ ದೊರೆತ ಕೆಲವು ಪ್ರತಿಮೆಗಳನ್ನೂ ಇಲ್ಲಿ ಸಂರಕ್ಷಿಸಲಾಗಿದೆ.

Badami Caves
Location of Badami Caves : Badami caves lies in the state of Karnataka in India. It is located near the red sandstone ridge in the northern part of the city. The best time to visit these caves lies between the month of October to February.
These caves were built during the regime of the Chalukya Empire around the 6th century. They were discovered by the Pulekeshin I, the great Chalukya ruler. Along with these cave temples you may find here number of monuments belonging to the ancient times. These caves presents the perfect blend of the architectural design of the north India Nagara style and the south India Nagara. Description of caves of Badami : There are total of four Badami caves. Out of which three are the Brahminical caves and one is the Jain cave. Cave I is dedicated to Lord Shiva, Cave II and III to Lord Vishnu and cave IV to the Jain saints.
Cave I :
It is the oldest of the four caves of Badami. It was carved in 578 AD made of red sandstone. A flight of steps leads to the hall of pillars, behind which is the square shaped sanctum. The cave is beautifully designed with the painting and carved work that leaves the tourists spell binded. Apart from the walls the ceilings provides the ultimate example of the finest art work of that period. Another main attraction of the ceilings are the Nataraja panel and the carved panels. The ceiling also has the collection of paintings of Shiva and Parvati.
Cave II :
In this cave you will find Lord Vishnu in different forms and shapes. In one of the images Lord Vishnu is shown as Trivikrama. The artists try to portrays Vishnu with one foot conquering the earth and the other covering the sky. There is one more very beautiful image of Vishnu which displays him as Varaha, the boar incarnation of Vishnu. But the most striking feature of the cave is the form Lord Vishnu, riding the Garuda and the lotus is encircled by the sixteen fishes.
Cave III :
This is the most interesting cave among the four caves of Badami. The cave contains the wonderful sculptures and paintings of the Lord Shiva and Lord Vishnu. This beautiful large cave is approximately 70 feet wide. You may find here the images of Trivikrama, Shankaranarayana, Bhuvaraha, Anantasayana, Harihara. It is only cave which contains inscriptions dating back from 578 AD.
Cave IV :
It is the only Jain cave among the other four Badami caves. The cave was completed around 100 years later when the other three caves were completed. The main attractions of the cave include image of Lord Mahavira, image of Lord Parsvanath (with the serpent in his feet), images of Padmavathi and Tirthankaras.
Excursion from Badami Caves :
There are many sightseeing places around the Badami caves. You can make a visit to the famous historic village of Pattadakal, which lies at the distance of 20 km from Badami. The village has many picturesque temples dating back to the 6th and 7th century AD. Than You can also make a visit to the Mahakuta temple a and Naganath temple, 10 kms from Badami.
This Page is Maintained by Chief Officer, TMC Badami
Last date of updation : 31.01.2012

